ರತ್ನಾಕರ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯು ಫೇಸ್ಬುಕ್ ಮೂಲಕ ಅನಂತನಿಗೆ ಪರಿಚಯವಾಗಿದ್ದ. ತಾನು ಬಡ ಕುಟುಂಬದವನು ಎಂದು ರತ್ನಾಕರ ಹೇಳಿದ್ದ. ಅದಕ್ಕೆ ಅನಂತನು ತನ್ನ ಅಣ್ಣನಾದ ಅರವಿಂದನಿಗೆ "ಅಣ್ಣ, ಹೀಗೊಬ್ಬ ಬಡ ವಿದ್ಯಾರ್ಥಿ ಇದ್ದಾನೆ. ಅವನನ್ನು ನಾನು ಹಲವಾರು ಬಾರಿ ಭೇಟಿ ಕೂಡ ಆಗಿದ್ದೇನೆ. ಒಳ್ಳೆಯವನ ಹಾಗೆ ಕಾಣಿಸುತ್ತಾನೆ. ಆರ್ಥಿಕವಾಗಿ ತೊಂದರೆಯಲ್ಲಿದ್ದಾನಂತೆ. ಏನು ಮಾಡೋಣ?" ಎಂದು ಕೇಳಿದ.
ಅರವಿಂದನು "ಹಾಗಿದ್ದರೆ ನಾವಿಬ್ಬರೂ ಸೇರಿ ಅವನಿಗೆ ಸಹಾಯ ಮಾಡೋಣ. ಅವನು ಚೆನ್ನಾಗಿ ಓದಲಿ" ಎಂದನು.
ಅರವಿಂದ ಭಾವುಕ ಜೀವಿ. ಮೊದಲಿನಿಂದಲೂ ಆತ ಸಮಾಜದಲ್ಲಿ ಇತರರ ಒಳಿತಿಗಾಗಿ ಸ್ವಲ್ಪವೂ ಅಹಂ ಇಲ್ಲದೆ ಕೆಲಸ ಮಾಡುತ್ತಿದ್ದ. ಅಂತೂ ರತ್ನಾಕರನಿಗೆ ಆರ್ಥಿಕವಾಗಿ ಸಾಧ್ಯವಾದಷ್ಟು ನೆರವು ನೀಡುವುದು ಎಂದು ತೀರ್ಮಾನವಾಯಿತು. "ರತ್ನಾಕರನು ಪರೀಕ್ಷೆ ಮುಗಿಸಿ ವಾಪಸ್ಸು ಬರಲಿ. ಆಗ ಅವನನ್ನು ಭೇಟಿ ಆಗಿ ಈ ಬಗ್ಗೆ ಮಾತನಾಡಿದರಾಯಿತು" ಎಂದು ಅನಂತನು ಅರವಿಂದನಿಗೆ ಹೇಳಿದನು.
ಒಂದು ದಿನ ಹೀಗೆ ಆಫೀಸ್ ನಲ್ಲಿ ಅನಂತನು ಫೇಸ್ಬುಕ್ ನಲ್ಲಿ ಹಳೆಯ ಮಿತ್ರರೊಡನೆ ಚಾಟ್ ಮಾಡುತ್ತಿರುವಾಗ, ರತ್ನಾಕರನು ಎಲ್ಲೋ ಕಾಮೆಂಟ್ ಮಾಡುತ್ತಾ ಇರುವುದು ಕಂಡು ಬಂತು. ಸಮಯ: ಮಧ್ಯಾಹ್ನ ೨:೩೫. ಇಂದು exam ಇದೆ ಅಂತ ಹೇಳಿದ್ದನಲ್ಲ ರತ್ನಾಕರ. ಇವನು ಇನ್ನೂ ಫೇಸ್ಬುಕ್ ನಲ್ಲೇ ಏನು ಮಾಡುತ್ತಿದ್ದಾನೆ? ಒಮ್ಮೆ VTU website ನಲ್ಲಿ time-table ನೋಡುವುದು ಉತ್ತಮ ಎನಿಸಿತು. ಅದನ್ನು check ಮಾಡಿದಾಗ ಒಂಥರಾ shock ಆಯಿತು. ಅಂದು ಮಧ್ಯಾಹ್ನ ೨ ಘಂಟೆಗೆ Basic Electrical Engineering ಪರೀಕ್ಷೆ ಇತ್ತು. ಆದರೆ ರತ್ನಾಕರ ೩ ಘಂಟೆಯವರೆಗೂ ಫೇಸ್ಬುಕ್ ನಲ್ಲೇ ಕಾಮೆಂಟ್ ಮಾಡುತ್ತಾ ಇದ್ದ. ಇವನು ನಮ್ಮ ಹತ್ತಿರವೇ ಸುಳ್ಳು ಹೇಳಿದನಲ್ಲ ಎಂದು ಅನಂತನಿಗೆ ಬೇಸರವಾಯಿತು.
ಹೀಗೆ ದಿನ ಕಳೆದವು. VTU website ನಲ್ಲಿ ಇಂಜಿನಿಯರಿಂಗ್ ಪರೀಕ್ಷೆಗಳ ಫಲಿತಾಂಶ ಬಂದಿದೆ ಎಂದು ಅನಂತನ ಭಾವ ಅಕ್ಷಯ ಹೇಳಿದನು. ರತ್ನಾಕರನಿಗೆ ಫೇಸ್ಬುಕ್ ನಲ್ಲಿ ಸುಮ್ಮನೆ message ಮಾಡಿ "ತಮಾ result ಏನಾಯಿತು?" ಎಂದು ಅನಂತ ಕೇಳಿದನು. ಅದಕ್ಕೆ ರತ್ನಾಕರನು "ಅಣ್ಣ first class ಆಗಿದೆ" ಎಂದ. ಆದರೆ ಅನಂತನಿಗೆ ರತ್ನಾಕರನ ಮಾತಿನ ಮೇಲೆ ಭರವಸೆ ಇರಲಿಲ್ಲ. ಸ್ವತಃ ಇಂಜಿನಿಯರ್ ಆಗಿದ್ದ ಅನಂತನಿಗೆ VTU site ನಲ್ಲಿ ಯಾರದ್ದೋ result ಹುಡುಕುವುದು ದೊಡ್ಡ ವಿಷಯವಾಗಿರಲಿಲ್ಲ. ಅಂತೂ ರತ್ನಾಕರನ result ಹುಡುಕಿದ ಅನಂತ. ರತ್ನಾಕರ ಎರಡನೇ ಬಾರಿ washout ಆಗಿದ್ದ. ಅಂದರೆ ಎರಡು ವರ್ಷ ಸತತವಾಗಿ ಕಳೆದುಕೊಂಡಿದ್ದ. First year ನಲ್ಲಿ ಹಲವಾರು subject ಗಳು ಇನ್ನೂ back ಇದ್ದವು. ರತ್ನಾಕರನ ಪಕ್ಕದ ಮನೆಯ ಹತ್ತಿರ ಇರುವವರ ವಿಚಾರಿಸಿ ಕೇಳಿದರು ಅನಂತ ಹಾಗು ಅರವಿಂದ. ಆಗ ಒಬ್ಬ ಹಿರಿಯ ವ್ಯಕ್ತಿ ಹೇಳಿದರು "ರತ್ನಾಕರನ ತಂದೆ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಮಗ ಮಾತ್ರ ಹೀಗೆ ನೋಡಿ. ಸ್ವಲ್ಪವೂ ಅವನಿಗೆ ಜವಾಬ್ದಾರಿ ಎನ್ನುವುದಾಗಲಿ ಅಥವಾ ತನ್ನ ಮನೆಯವರು ಆರ್ಥಿಕವಾಗಿ ಗಟ್ಟಿಯಿಲ್ಲ. ಹಾಗಾಗಿ ತಾನು ಕಷ್ಟಪಟ್ಟು ಮುಂದೆ ಬರಬೇಕು ಎಂಬ ಛಲವೇ ಇಲ್ಲ. ಅವರ ಊರಿನ ಇನ್ನೊಬ್ಬ ಹುಡುಗ ಸುಧಾಕರ ಕೂಡ ಇವನ ಹಾಗೆ. ಓದುವುದಿಲ್ಲ. ಕೇವಲ ಫೇಸ್ಬುಕ್, Whatsapp ನಲ್ಲೇ ಮುಳುಗಿರುತ್ತಾನೆ. ಆದರೆ ಸುಧಾಕರನಿಗೆ ಜೀವನಕ್ಕೆ ತಂದೆ ಮಾಡಿಟ್ಟಿರುವ ಒಳ್ಳೆ ಜಮೀನು ಇದೆ. ಅವನು ಹೇಗಾದರೂ ಜೀವನ ಮಾಡಬಲ್ಲ. ಆದರೆ ರತ್ನಾಕರನಿಗೆ ಮನೆಯಲ್ಲಿ ಆಸ್ತಿ ಇಲ್ಲ. ಅವನ ಬುದ್ಧಿಶಕ್ತಿಯೇ ಅವನಿಗೆ ಆಸ್ತಿ. ಆದರೆ ಅವನು ಅದನ್ನೆಲ್ಲ ಬಿಟ್ಟು ಕೇವಲ ಶೋಕಿಲಾಲ ಆಗಿಬಿಟ್ಟಿದ್ದಾನೆ. ಏನು ಮಾಡುವುದು?" ಎಂದರು.
"ಆಯಿತು ಅಂಕಲ್. ನಾವಿನ್ನು ಬರುತ್ತೇವೆ" ಎಂದು ಅನಂತ ಹಾಗು ಅರವಿಂದ ಅಲ್ಲಿಂದ ಹೊರಟರು.
ಆಗ ಅನಂತನು "ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್, whatsapp ವಿದ್ಯಾವಂತರಿಗೆ ಬಹುಬೇಗನೆ ತಲುಪಬೇಕಾದ ಮಾಹಿತಿಗಳನ್ನು ನೀಡುತ್ತಿರುವುದು ವರದಾನವೇ ಸರಿ. ಎಷ್ಟೋ ಬಾರಿ ನಮಗೆ ತಿಳಿಯದೆ ಇದ್ದ ಮಾಹಿತಿಗಳು, ಬಹಳ ದಿನಗಳಿಂದ ಅನಿವಾರ್ಯ ಕಾರಣಗಳಿಂದ ದೂರವಿರುವ ಮಿತ್ರರನ್ನು ಸಂಪರ್ಕಿಸಿ ಅವರೊಂದಿಗೆ ಸಂವಹನ ನಡೆಸಲು ಈ ಎಲ್ಲ ಜಾಲತಾಣಗಳು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅತಿಯಾದರೆ ಅಮೃತವೂ ಕೂಡ ವಿಷ ಎಂಬಂತೆ ಈ ಸೋಶಿಯಲ್ ನೆಟ್ವರ್ಕ್ ಗಳ ಅತಿಯಾದ ಬಳಕೆ ಒಳ್ಳೆಯದಲ್ಲ" ಎಂದನು.
ಅದಕ್ಕೆ ಅರವಿಂದನು "ಹೌದು. ನನಗೂ ಹಾಗೆ ಅನಿಸುತ್ತೆ. ರತ್ನಾಕರನಿಗೆ ಇಂಜಿನಿಯರಿಂಗ್ ಕಷ್ಟವಾದರೆ ಬೇರೆ degree ಮಾಡಲಿ. ಕೇವಲ ಮಾರ್ಕ್ಸ್ ಮೇಲೆ ನಾವು ಯಾರೊಬ್ಬರನ್ನು ಅಳೆಯಲು ಸಾಧ್ಯವಿಲ್ಲ. ಆದರೆ ರತ್ನಾಕರನ ವಿಚಾರದಲ್ಲಿ ಅವನ attitude ಬದಲಾಗಬೇಕು. ಇಲ್ಲವಾದರೆ ಯಾವುದೇ degree ಮಾಡಿದರೂ ಅವನ ಕಥೆ ಅಷ್ಟೆ. ನಾವು ಕೇವಲ suggestion ಕೊಡಬಹುದು. ಆದರೆ ಅವನಿಗೆ ತಾನು ತಪ್ಪು ಮಾಡುತ್ತಿದ್ದೇನೆ ಎಂದು realise ಆಗಬೇಕು. ಅಲ್ಲಿಯ ತನಕ ಹೀಗೆ ಸುಳ್ಳು ಹೇಳುವುದು ಮುಂದುವರಿಸುತ್ತಾ ಇರುತ್ತಾನೆ ಅವನು" ಎಂದನು.
ಅನಂತನು "ನಿಜ ಅರವಿಂದಣ್ಣ. ಹಿಂದೆ ಕುಡಿತ, ಡ್ರಗ್ಸ್, ಸಿಗರೇಟ್, ಜೂಜು ಇತ್ಯಾದಿಗಳನ್ನು ಚಟ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಅಂತೆಯೇ ಮೊಬೈಲ್, ಫೇಸ್‌ಬುಕ್ ಅಥವಾ ಇಂಟರ್ನೆಟ್‌ನ ಇತರ ಸೌಕರ್ಯಗಳ ಅತಿಯಾದ ನಿರಂತರ ಬಳಕೆ ಆಧುನಿಕ ವ್ಯಸನಗಳಾಗಿವೆ. ಹಾಗಾಗಿ ಸಾಮಾಜಿಕ ಜಾಲತಾಣಗಳನ್ನು ಮಿತಿಯಲ್ಲಿ ಬಳಸಿದರೆ ಒಳಿತು. ಮುಖ್ಯವಾಗಿ ಯುವ ಜನಾಂಗದವರು ಎಚ್ಚೆತ್ತುಕೊಳ್ಳಬೇಕು" ಎಂದನು.

No comments:
Post a Comment