ಈ ಮನಸ್ಸು ಮಂಗನಂತೆ ಚಂಚಲ,
ಆನೆಯಂತೆ ಬಲಿಷ್ಠ. ಪ್ರತಿಯೊಂದು ಪ್ರಾಣಿಗೂ, ವಸ್ತುವಿಗೂ ಅದರದೇ ಆದ ಸ್ವಭಾವವಿರುವಂತೆ,
ಮನಸ್ಸಿಗೆ ಹುಚ್ಚೆದ್ದು ಕುಣಿಯುವ ಸ್ವಭಾವವಿದೆ.
ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ, ಅದರ ಮೂಲಕ ಮಹತ್ಕಾರ್ಯಗಳನ್ನು ಸಾಧಿಸಬಹುದು. ನಮ್ಮ ವಶದಲ್ಲಿ ಇಲ್ಲದಿದ್ದರೆ ಸಾಮಾನ್ಯ ಕಾರ್ಯವನ್ನು ಮಾಡಿಸಲು ಸಾಧ್ಯವಿಲ್ಲ. ನಮ್ಮ ಮನಸ್ಸಿಗೆ ಪ್ರಚಂಡ ಶಕ್ತಿ ಇದೆ. ಆದರೆ ಈ ಶಕ್ತಿ ನಾನಾ ರೀತಿಗಳಿಂದ ಹರಿದು ಹಂಚಿ ಹೋಗಿದೆ. ಉದಾಹರಣೆಗೆ ಸೂರ್ಯನ ಕಿರಣಗಳು ಹರಡಿಕೊಂಡಾಗ, ಅವುಗಳಿಗೆ ಶಾಖ ಮಾತ್ರ ಇರುತ್ತದೆ. ಆದರೆ ಅದೇ ಕಿರಣಗಳನ್ನು ಭೂತಗನ್ನಡಿಯ ಮೂಲಕ ಹಾಯಿಸಿ, ಕಾಗದದ ಮೇಲೆ ಬಿಟ್ಟಾಗ ಬೆಂಕಿ ಹೊತ್ತಿಕೊಳ್ಳುವುದು ಕಾಣುತ್ತದೆ. ಸೂರ್ಯನ ಕಿರಣಗಳು ಒಂದೇ ಕಡೆ ಸೇರಿದ್ದರಿಂದ ಬೆಂಕಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಹರಡಿಕೊಂಡಿರುವ ಮನಶಕ್ತಿಯನ್ನು ಒಗ್ಗೂಡಿಸಬೇಕಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ಏಕಾಗ್ರಗೊಂಡ ಮನಸ್ಸು ಒಂದು ಸರ್ಚ್ ಲೈಟ್ ಇದ್ದ ಹಾಗೆ. ಸರ್ಚ್ ಲೈಟು ದೂರದ ಮೂಲೆಯಲ್ಲಿರುವ ವಸ್ತುವನ್ನು ಕಣ್ಣಿಗೆ ಕಾಣಿಸುವಂತೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮಗೆ ಅಗತ್ಯವಾದ ವಿಷಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಿದರೆ, ತಮ್ಮ ತಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತಾರೆ. ನಾನಾ ವಿಷಯಗಳ ಕಡೆಗೆ ಹರಿಯುತ್ತಿರುವ ಮನಸ್ಸಿನ ಶಕ್ತಿಯನ್ನು ಒಂದೇ ವಿಷಯದ ಕಡೆಗೆ ಹರಿಯುವಂತೆ ಮಾಡುವುದಕ್ಕೆ "ಏಕಾಗ್ರತೆ" (ಏಕ = ಒಂದು, ಅಗ್ರ = ತುದಿ) ಎನ್ನಬಹುದು.

No comments:
Post a Comment